ಸೇವೆಗಳು & ಆಚರಣೆಗಳು ಕಳಸ ಬರವಣಿಗೆ: ಇದು ಈ ಕ್ಷೇತ್ರದ ಅತಿ ದೊಡ್ಡ ವಿಶೇಷ. ಭಕ್ತರ ಪ್ರಶ್ನೆಗಳಿಗೆ ತಾಯಿಯು ಅಕ್ಷರ ರೂಪದಲ್ಲಿ ಮಾರ್ಗದರ್ಶನ ನೀಡುವ ಪವಿತ್ರ ವಿಧಾನ. ಅಕ್ಷರಾಭ್ಯಾಸ:ಮಕ್ಕಳ ಶಿಕ್ಷಣದ ಪ್ರಗತಿಗಾಗಿ ನಡೆಸಲಾಗುವ ಜ್ಞಾನದೀಪದ ಕಾರ್ಯಕ್ರಮ. ವಿಶೇಷ ಪೂಜೆಗಳು:ಚಂಡಿಯಾಗ, ಸುದರ್ಶನ ಹೋಮ (ಅಮಾವಾಸ್ಯೆ/ಹುಣ್ಣಿಮೆಯಂದು), ಮಡಲಕ್ಕಿ ಸೇವೆ ಮತ್ತು ಸಂಕಲ್ಪ ಸಿದ್ಧಿಗಾಗಿ 5 ಅಥವಾ 9 ಮೂಡುಪುಗಳನ್ನು ಕಟ್ಟುವುದು. ಸಾಮಾಜಿಕ ಸೇವೆಗಳು ವಿದ್ಯಾಭ್ಯಾಸಕ್ಕೆ ನೆರವು ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ. ಅನ್ನದಾಸೋಹ ಪ್ರತಿದಿನ ಬರುವ ಭಕ್ತಾದಿಗಳಿಗೆ ಯಾವುದೇ ಭೇದ-ಭಾವವಿಲ್ಲದೆ ನಿತ್ಯ ಅನ್ನಸಂತರ್ಪಣೆ ನಡೆಯುತ್ತದೆ. ಗೋಸೇವೆ ಗೋವುಗಳನ್ನು ಪೂಜನೀಯವಾಗಿ ಸಲಹಲಾಗುತ್ತಿರುವ ಸುಸಜ್ಜಿತ ಗೋಶಾಲೆ. ದೇವಾಲಯಗಳ ಅಭಿವೃದ್ಧಿ ಸುತ್ತಮುತ್ತಲಿನ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಹಾಯ ಹಸ್ತ. ಸಾಂಸ್ಕೃತಿಕ ಬೆಂಬಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ. ಗ್ಯಾಲರಿ ಶ್ರೀ ವಿದ್ಯಾ ಚೌಡೇಶ್ವರಿ ಸನ್ನಿಧಿಯ ಪವಿತ್ರ ಸ್ಥಳಗಳು ಮತ್ತು ರೋಮಾಂಚಕ ಆಚರಣೆಗಳ ಕ್ಷಣಗಳು.