Loading Events

« All Events

  • This event has passed.

ಆಷಾಢ ಅಮಾವಾಸ್ಯೆ ವಿಶೇಷ – ಜುಲೈ 14ರಂದು ಕೆ.ಜಿ. ದೇವಪಟ್ಟಣದಲ್ಲಿ ಧಾರ್ಮಿಕ ವೈಭ

July 14 @ 8:00 am - 5:00 pm
ಆಷಾಢ ಅಮಾವಾಸ್ಯೆ ವಿಶೇಷ – ಜುಲೈ 14ರಂದು ಕೆ.ಜಿ. ದೇವಪಟ್ಟಣದಲ್ಲಿ ಧಾರ್ಮಿಕ ವೈಭವ

ಆಷಾಢ ಅಮಾವಾಸ್ಯೆ ವಿಶೇಷ – ಜುಲೈ 14ರಂದು ಕೆ.ಜಿ. ದೇವಪಟ್ಟಣದಲ್ಲಿ ಧಾರ್ಮಿಕ ವೈಭವ

ಭಕ್ತರ ಆರಾಧ್ಯ ದೈವ, ಶೃಂಗೇರಿ ಶಾರದಾ ಪೀಠದ ಪರಿಪಲಿತ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಜಿ. ದೇವಪಟ್ಟಣದಲ್ಲಿ ನೆಲೆನಿಂತಿರುವ ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಜುಲೈ 14ರ ಮಂಗಳವಾರದಂದು ಆಷಾಢ ಅಮಾವಾಸ್ಯೆಯ ಭವ್ಯ ಪೂಜಾ ಮಹೋತ್ಸವ ಜರುಗಲಿದೆ!

ಹೌದು, ಆಷಾಢ ಅಮಾವಾಸ್ಯೆಯ ಈ ಪವಿತ್ರ ದಿನದಂದು ತಾಯಿಯ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಲಿವೆ.
ಜುಲೈ 13 ಸೋಮವಾರ ಮಧ್ಯರಾತ್ರಿ: ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರಿಗೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ವಿಶೇಷ ಪೂಜೆ ನಡೆಯಲಿದೆ.
ಜುಲೈ 14 ಮಂಗಳವಾರ: ತಾಯಿಗೆ ಕಣ್ಮನ ಸೆಳೆಯುವ ವಿಶೇಷ ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಲಿದೆ.

ಮುಖ್ಯವಾಗಿ ಜುಲೈ 14ರ ಬೆಳಗಿನ ಜಾವ 5:00 ಗಂಟೆಗೆ, ತಾಯಿಗೆ ಲೇಪಿತವಾದ ಪವಿತ್ರ ಅರಿಶಿನದಿಂದ ಭಕ್ತರಿಗೆ ಅರಿಶಿನ ಸ್ನಾನ ಹಾಗು ಸಾಲಿಗ್ರಾಮ ತೀರ್ಥವನ್ನು ಸಂಪ್ರೋಕ್ಷಣೆ ಮಾಡುವ ಪುಣ್ಯ ಕಾರ್ಯಕ್ರಮ ಜರುಗಲಿದೆ.
ಇದೇ ವೇಳೆ, ಭಕ್ತರ ಸುಖ-ಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಶತಚಂಡಿ ಹೋಮ ಶ್ರದ್ಧಾಭಕ್ತಿಗಳಿಂದ ನೆರವೇರಲಿವೆ. ತದನಂತರ ಹಂಗರಹಳ್ಳಿ ಬಸವಣ್ಣನವರ ನೇತೃತ್ವದಲ್ಲಿ ಹೂ ಹೊಂಬಾಳೆ ಪೂಜೆ ಅದ್ದೂರಿಯಾಗಿ ನೆರವೇರುತ್ತದೆ .ಉತ್ಸವ ಮೂರ್ತಿಗಳಾದ ಶ್ರೀ ಶನೇಶ್ವರ ಸ್ವಾಮಿ, ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರು ಮತ್ತು ಚಿಕ್ಕ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರದೊಂದಿಗೆ ಭವ್ಯ ಪ್ರಾಕಾರೋತ್ಸವ ನಡೆಯಲಿದೆ.

ಲೋಕ ಕಲ್ಯಾಣಕ್ಕಾಗಿ ನಡೆಯುವ ಈ ಮಹಾ ಪೂಜಾ ಕೈಂಕರ್ಯದಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಕೆ.ಜಿ. ದೇವಪಟ್ಟಣದ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ದರ್ಶನ ಪಡೆದು ಕೃಪಾಕಟಾಕ್ಷಕ್ಕೆ ಪಾತ್ರರಾಗಿ.

 

Details

  • Date: July 14
  • Time:
    8:00 am - 5:00 pm