ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರ

ಈ ಪವಿತ್ರ ಕ್ಷೇತ್ರವು ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ), ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆಯಲ್ಲಿದೆ. ಇದು ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿ ಇವರ ಪರಿಪಾಲನೆಯಲ್ಲಿರುವ ಪುಣ್ಯಕ್ಷೇತ್ರವಾಗಿದೆ.
ದೇವಾಲಯಕ್ಕೆ ಬರುವ ಮಾರ್ಗಗಳು
ಬೆಂಗಳೂರು ಕಡೆಯಿಂದ
ಬೆಂಗಳೂರು → ನೆಲಮಂಗಲ → ಕುಣಿಗಲ್ → ಹುಲಿಯೂರುದುರ್ಗ → ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ)
ತುಮಕೂರು ಕಡೆಯಿಂದ
ತುಮಕೂರು → ಕುಣಿಗಲ್ → ಹುಲಿಯೂರುದುರ್ಗ → ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ)
ಮೈಸೂರು ಕಡೆಯಿಂದ
ಮೈಸೂರು → ಶ್ರೀರಂಗಪಟ್ಟಣ → ಮಂಡ್ಯ → ಮದ್ದೂರು → ಹುಲಿಯೂರುದುರ್ಗ → ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ)
ಹಾಸನ ಕಡೆಯಿಂದ
ಹಾಸನ → ಚನ್ನರಾಯಪಟ್ಟಣ → ಬೆಳ್ಳೂರು ಕ್ರಾಸ್ → ಕುಣಿಗಲ್ → ಹುಲಿಯೂರುದುರ್ಗ → ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ)
ಕ್ಷೇತ್ರದ ವಿಶೇಷತೆ
ಜಗನ್ಮಾತೆ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ದಿವ್ಯ ಸಾನ್ನಿಧ್ಯವಿರುವ ಪವಿತ್ರ ಕ್ಷೇತ್ರ.
ಶಾಂತ, ಸುಂದರ ಹಾಗೂ ಆಧ್ಯಾತ್ಮಿಕ ವಾತಾವರಣ ಹೊಂದಿರುವ ಮೂಲ ಕಳಸ ಬರವಣಿಗೆ ಕ್ಷೇತ್ರವಾಗಿದೆ
ನಿತ್ಯ ಪೂಜೆ, ವಿಶೇಷ ಅಲಂಕಾರ, ಪ್ರತಿ ತಿಂಗಳ ಅಮಾವಾಸ್ಯೆ, ಹುಣ್ಣಿಮೆ ದಿನದಂದು ಸತ್ಯನಾರಾಯಣ ಪೂಜೆ ,ಸುದರ್ಶನ ಹೋಮ ,ಶತಚಂಡಿ ಹೋಮ ಜೊತೆಗೆ ಹಬ್ಬ-ಹರಿದಿನಗಳ ಆಚರಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಭಕ್ತರು ಅಮ್ಮನವರ ದರ್ಶನ ಪಡೆದು ಆಶೀರ್ವಾದ ಹಾಗೂ ಆಧ್ಯಾತ್ಮಿಕ ಶಾಂತಿಯನ್ನು ಹೊಂದಬಹುದು.
ಪವಿತ್ರ ಕ್ಷೇತ್ರದ ವಿಳಾಸ
ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರ
ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ),
ಹುಲಿಯೂರುದುರ್ಗ ಹೋಬಳಿ,
ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ, ಕರ್ನಾಟಕ.
॥ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಿ, ಭಕ್ತಿ-ಶ್ರದ್ಧೆಯಿಂದ ಕ್ಷೇತ್ರಕ್ಕೆ ಆಗಮಿಸಿ ದಿವ್ಯ ಆಶೀರ್ವಾದವನ್ನು ಪಡೆಯಿರಿ ॥ 🙏🏻🌺
ಜೈ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರಿಗೆ ನಮಃ.