BEGIN:VCALENDAR
VERSION:2.0
PRODID:-// - ECPv6.16.3//NONSGML v1.0//EN
CALSCALE:GREGORIAN
METHOD:PUBLISH
X-ORIGINAL-URL:https://vidyachowdeshwaritemple.org
X-WR-CALDESC:Events for 
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:Asia/Kolkata
BEGIN:STANDARD
TZOFFSETFROM:+0530
TZOFFSETTO:+0530
TZNAME:IST
DTSTART:20250101T000000
END:STANDARD
END:VTIMEZONE
BEGIN:VEVENT
DTSTART;TZID=Asia/Kolkata:20260612T080000
DTEND;TZID=Asia/Kolkata:20260612T170000
DTSTAMP:20260717T215503
CREATED:20260612T062327Z
LAST-MODIFIED:20260612T062327Z
UID:604-1781251200-1781283600@vidyachowdeshwaritemple.org
SUMMARY:12ರಂದು ಹಂಗರಹಳ್ಳಿ ಬಸವಣ್ಣ ಹಾಗೂ ಚಿಕ್ಕ ಚೌಡಮ್ಮನವರ ವಿಜಯಯಾತ್ರೆ
DESCRIPTION:ಜೂನ್ 12ರಂದು ಹಂಗರಹಳ್ಳಿ ಬಸವಣ್ಣ ಹಾಗೂ ಚಿಕ್ಕ ಚೌಡಮ್ಮನವರ ವಿಜಯಯಾತ್ರೆ \nದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ\, ಶೃಂಗೇರಿ ಪರಿಪಾಲಿತ ಶ್ರೀವಿದ್ಯಾ ಚೌಡೇಶ್ವರಿ ಅಮ್ಮನವರ ಶ್ರೀಕ್ಷೇತ್ರದ ಆಶ್ರಯದಲ್ಲಿ ಕಲಿಯುಗದ ಕಾಮಧೇನು ಎಂದೇ ಭಕ್ತರಿಂದ ಆರಾಧಿಸಲ್ಪಡುವ ಹಂಗರಹಳ್ಳಿ ಬಸವಣ್ಣ ಮತ್ತು ಚಿಕ್ಕ ಚೌಡಮ್ಮನವರ ವಿಜಯಯಾತ್ರೆಯು ಜೂನ್ 12\, ಶುಕ್ರವಾರ ಸಂಜೆ 4 ಗಂಟೆಗೆ ಭಕ್ತಿಭಾವದಿಂದ ನಡೆಯಲಿದೆ. \nವಿಜಯಯಾತ್ರೆಯು ಕೆ.ಜಿ. ದೇವಪಟ್ಟಣದಿಂದ ಆರಂಭಗೊಂಡು ಚೌಡನಕುಪ್ಪೆ\, ರಾಮನಗರ\, ಬಿಡದಿ ಮಾರ್ಗವಾಗಿ ವಜರಹಳ್ಳಿ (ಬೆಂಗಳೂರು) ತಲುಪಲಿದೆ. ಯಾತ್ರೆಯುದ್ದಕ್ಕೂ ಭಕ್ತರು ಪೂಜೆ\, ಪುಷ್ಪಾರ್ಚನೆ ಹಾಗೂ ಮಂಗಳಾರತಿ ಸಲ್ಲಿಸುವ ಮೂಲಕ ದೈವೀ ಕೃಪೆಗೆ ಪಾತ್ರರಾಗಲಿದ್ದಾರೆ. \nಈ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀಮತಿ ಲೀಲಾವತಿ\, ಶ್ರೀ ಶಂಕರಪ್ಪ ಹಾಗೂ ಕುಟುಂಬದವರು\, ವಜರಹಳ್ಳಿ\, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾಗಿದೆ. \nಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಂಗರಹಳ್ಳಿ ಬಸವಣ್ಣ ಮತ್ತು ಚಿಕ್ಕ ಚೌಡಮ್ಮನವರ ಆಶೀರ್ವಾದ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ. \nಸ್ಥಳ: ವಜರಹಳ್ಳಿ\, ಬೆಂಗಳೂರು\nದಿನಾಂಕ: 12 ಜೂನ್ 2026\, ಶುಕ್ರವಾರ\nಸಮಯ: ಸಂಜೆ 4.00 ಗಂಟೆ \nಹೆಚ್ಚಿನ ಮಾಹಿತಿಗಾಗಿ:\nಶ್ರೀವಿದ್ಯಾ ಚೌಡೇಶ್ವರಿ ಅಮ್ಮನವರ ಶ್ರೀಕ್ಷೇತ್ರ ಕೆ.ಜಿ. ದೇವಪಟ್ಟಣ\, ಕುಣಿಗಲ್ ತಾಲ್ಲೂಕು\, ತುಮಕೂರು ಜಿಲ್ಲೆ
URL:https://vidyachowdeshwaritemple.org/event/12%e0%b2%b0%e0%b2%82%e0%b2%a6%e0%b3%81-%e0%b2%b9%e0%b2%82%e0%b2%97%e0%b2%b0%e0%b2%b9%e0%b2%b3%e0%b3%8d%e0%b2%b3%e0%b2%bf-%e0%b2%ac%e0%b2%b8%e0%b2%b5%e0%b2%a3%e0%b3%8d%e0%b2%a3-%e0%b2%b9%e0%b2%be/
ATTACH;FMTTYPE=image/jpeg:https://vidyachowdeshwaritemple.org/wp-content/uploads/2026/06/sri-vidya-chowdeshwari-event12.jpg
END:VEVENT
BEGIN:VEVENT
DTSTART;TZID=Asia/Kolkata:20260615T080000
DTEND;TZID=Asia/Kolkata:20260615T170000
DTSTAMP:20260717T215503
CREATED:20260611T072949Z
LAST-MODIFIED:20260611T073203Z
UID:596-1781510400-1781542800@vidyachowdeshwaritemple.org
SUMMARY:ಜೂನ್ 15ರಂದು ಅಧಿಕ ಜ್ಯೇಷ್ಠ ಅಮಾವಾಸ್ಯೆ ಅಂಗವಾಗಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ\, ಶತಚಂಡಿ ಯಾಗ ಹಾಗೂ ಭವ್ಯ ಪ್ರಕಾರೋತ್ಸವ
DESCRIPTION:ಪತ್ರಿಕಾ ಪ್ರಕಟಣೆ \nಜೂನ್ 15ರಂದು ಅಧಿಕ ಜ್ಯೇಷ್ಠ ಅಮಾವಾಸ್ಯೆ ಅಂಗವಾಗಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ\, ಶತಚಂಡಿ ಯಾಗ ಹಾಗೂ ಭವ್ಯ ಪ್ರಕಾರೋತ್ಸವ \nಕೆ.ಜಿ. ದೇವಪಟ್ಟಣ\, ಕುಣಿಗಲ್: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ\, ಶೃಂಗೇರಿ ಪರಿಪಾಲಿತ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಶ್ರೀ ಕ್ಷೇತ್ರದಲ್ಲಿ ಜೂನ್ 15ರಂದು ನಡೆಯಲಿರುವ ಅತ್ಯಂತ ಪವಿತ್ರ ಹಾಗೂ ವಿಶೇಷವಾದ ಅಧಿಕ ಜ್ಯೇಷ್ಠ ಅಮಾವಾಸ್ಯೆ ಅಂಗವಾಗಿ ವಿವಿಧ ಧಾರ್ಮಿಕ\, ಆಧ್ಯಾತ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. \nಕಳಸ ಬರವಣಿಗೆ ಮತ್ತು ಕಳಸ ಶಾಸ್ತ್ರದ ಮೂಲ ಸನ್ನಿಧಾನವೆಂದು ಪ್ರಸಿದ್ಧಿಯಾಗಿರುವ ಈ ಪುಣ್ಯಕ್ಷೇತ್ರದಲ್ಲಿ ವಿದ್ಯೆ ಮತ್ತು ಶಕ್ತಿಯ ಅಧಿದೇವತೆಯಾದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು\, ಹೋಮ-ಹವನಗಳು ಹಾಗೂ ಶತಚಂಡಿ ಯಾಗ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. \nಜೂನ್ 14ರ ಮಧ್ಯರಾತ್ರಿಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು\, ರಾತ್ರಿ 1.30 ಗಂಟೆಗೆ ಶ್ರೀ ವಿದ್ಯಾ ಚೌಡೇಶ್ವರಿ ತಾಯಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. \nಜೂನ್ 15ರಂದು ಬೆಳಗಿನ ಜಾವ 5 ಗಂಟೆಗೆ ಆಗಮಿಸುವ ಭಕ್ತಾದಿಗಳಿಗೆ ಹರಿಶಿನ ಸ್ನಾನ ಮಾಡಿಸಲಾಗುವುದು. ನಂತರ ಸಪ್ತ ನದಿಗಳ ಪವಿತ್ರ ಜಲದಿಂದ ಅಮ್ಮನವರಿಗೆ ಮಹಾಭಿಷೇಕ ನೆರವೇರಿಸಿ\, ಆ ಪವಿತ್ರ ತೀರ್ಥವನ್ನು ಭಕ್ತರ ಮೇಲೆ ಪ್ರೋಕ್ಷಣೆ ಮಾಡಲಾಗುವುದು. \nಮುಂಜಾನೆಯಿಂದಲೇ ದೇವಸ್ಥಾನದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ವಿವಿಧ ಹೋಮ-ಹವನಗಳು ಹಾಗೂ ಅತ್ಯಂತ ಶ್ರದ್ಧಾಭಕ್ತಿಯಿಂದ ಶತಚಂಡಿ ಯಾಗ ಜರುಗಲಿದೆ. ಈ ಯಾಗದಲ್ಲಿ ಭಾಗವಹಿಸುವ ಭಕ್ತರು ದೇವಿಯ ವಿಶೇಷ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ. \nಅದೇ ರೀತಿ ಕಲಿಯುಗದ ಕಾಮಧೇನು ಎಂದೇ ಭಕ್ತರಿಂದ ಆರಾಧಿಸಲ್ಪಡುವ ಹಂಗರಹಳ್ಳಿ ಬಸವಣ್ಣನವರ ನೇತೃತ್ವದಲ್ಲಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರು\, ಚಿಕ್ಕ ಚೌಡಮ್ಮ ಹಾಗೂ ಶ್ರೀ ಶನೇಶ್ವರ ಸ್ವಾಮಿಯವರ ಭವ್ಯ ಪ್ರಕಾರೋತ್ಸವವು ವೈಭವೋಪೇತವಾಗಿ ನಡೆಯಲಿದೆ. \nಮಕ್ಕಳ ವಿದ್ಯಾಭ್ಯಾಸ\, ಜ್ಞಾನವೃದ್ಧಿ ಹಾಗೂ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಆಗಮಿಸಿ ಅಕ್ಷರಾಭ್ಯಾಸ ಮಾಡಿಸಬಹುದಾಗಿದೆ. \nಅಧಿಕ ಜ್ಯೇಷ್ಠ ಅಮಾವಾಸ್ಯೆಯ ಈ ಅಪರೂಪದ ಪುಣ್ಯಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ\, ಯಾಗ-ಯಜ್ಞಗಳಲ್ಲಿ ಭಾಗವಹಿಸಿ ಶ್ರೀ ವಿದ್ಯಾ ಚೌಡೇಶ್ವರಿ ತಾಯಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿ ಮನವಿ ಮಾಡಿದೆ. \nಸ್ಥಳ: \nಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಶ್ರೀ ಕ್ಷೇತ್ರ\nಕೆ.ಜಿ. ದೇವಪಟ್ಟಣ\, ಕುಣಿಗಲ್ ತಾಲ್ಲೂಕು\, ತುಮಕೂರು ಜಿಲ್ಲೆ
URL:https://vidyachowdeshwaritemple.org/event/%e0%b2%9c%e0%b3%82%e0%b2%a8%e0%b3%8d-15%e0%b2%b0%e0%b2%82%e0%b2%a6%e0%b3%81-%e0%b2%85%e0%b2%a7%e0%b2%bf%e0%b2%95-%e0%b2%9c%e0%b3%8d%e0%b2%af%e0%b3%87%e0%b2%b7%e0%b3%8d%e0%b2%a0/
ATTACH;FMTTYPE=image/jpeg:https://vidyachowdeshwaritemple.org/wp-content/uploads/2026/06/sri-vidya-chowdeshwari-event1.jpg
END:VEVENT
BEGIN:VEVENT
DTSTART;TZID=Asia/Kolkata:20260615T080000
DTEND;TZID=Asia/Kolkata:20260617T170000
DTSTAMP:20260717T215503
CREATED:20260611T072603Z
LAST-MODIFIED:20260611T072603Z
UID:593-1781510400-1781715600@vidyachowdeshwaritemple.org
SUMMARY:ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರ
DESCRIPTION:ಈ ಪವಿತ್ರ ಕ್ಷೇತ್ರವು ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ)\, ಹುಲಿಯೂರುದುರ್ಗ ಹೋಬಳಿ\, ಕುಣಿಗಲ್ ತಾಲೂಕು\, ತುಮಕೂರು ಜಿಲ್ಲೆಯಲ್ಲಿದೆ. ಇದು ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ\, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ\, ಶೃಂಗೇರಿ ಇವರ ಪರಿಪಾಲನೆಯಲ್ಲಿರುವ ಪುಣ್ಯಕ್ಷೇತ್ರವಾಗಿದೆ. \nದೇವಾಲಯಕ್ಕೆ ಬರುವ ಮಾರ್ಗಗಳು \nಬೆಂಗಳೂರು ಕಡೆಯಿಂದ \nಬೆಂಗಳೂರು → ನೆಲಮಂಗಲ → ಕುಣಿಗಲ್ → ಹುಲಿಯೂರುದುರ್ಗ → ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ) \nತುಮಕೂರು ಕಡೆಯಿಂದ \nತುಮಕೂರು → ಕುಣಿಗಲ್ → ಹುಲಿಯೂರುದುರ್ಗ → ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ) \nಮೈಸೂರು ಕಡೆಯಿಂದ \nಮೈಸೂರು → ಶ್ರೀರಂಗಪಟ್ಟಣ → ಮಂಡ್ಯ → ಮದ್ದೂರು → ಹುಲಿಯೂರುದುರ್ಗ → ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ) \nಹಾಸನ ಕಡೆಯಿಂದ \nಹಾಸನ → ಚನ್ನರಾಯಪಟ್ಟಣ → ಬೆಳ್ಳೂರು ಕ್ರಾಸ್ → ಕುಣಿಗಲ್ → ಹುಲಿಯೂರುದುರ್ಗ → ಕೆ.ಜಿ. ದೇವಪಟ್ಟಣ (ಹಂಗರಹಳ್ಳಿ) \nಕ್ಷೇತ್ರದ ವಿಶೇಷತೆ \nಜಗನ್ಮಾತೆ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ದಿವ್ಯ ಸಾನ್ನಿಧ್ಯವಿರುವ ಪವಿತ್ರ ಕ್ಷೇತ್ರ. \nಶಾಂತ\, ಸುಂದರ ಹಾಗೂ ಆಧ್ಯಾತ್ಮಿಕ ವಾತಾವರಣ ಹೊಂದಿರುವ ಮೂಲ ಕಳಸ ಬರವಣಿಗೆ ಕ್ಷೇತ್ರವಾಗಿದೆ \nನಿತ್ಯ ಪೂಜೆ\, ವಿಶೇಷ ಅಲಂಕಾರ\, ಪ್ರತಿ ತಿಂಗಳ ಅಮಾವಾಸ್ಯೆ\, ಹುಣ್ಣಿಮೆ ದಿನದಂದು ಸತ್ಯನಾರಾಯಣ ಪೂಜೆ \,ಸುದರ್ಶನ ಹೋಮ \,ಶತಚಂಡಿ ಹೋಮ ಜೊತೆಗೆ ಹಬ್ಬ-ಹರಿದಿನಗಳ ಆಚರಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. \nಭಕ್ತರು ಅಮ್ಮನವರ ದರ್ಶನ ಪಡೆದು ಆಶೀರ್ವಾದ ಹಾಗೂ ಆಧ್ಯಾತ್ಮಿಕ ಶಾಂತಿಯನ್ನು ಹೊಂದಬಹುದು. \nಪವಿತ್ರ ಕ್ಷೇತ್ರದ ವಿಳಾಸ \nಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರ\nಕೆ.ಜಿ. ದೇವಪಟ್ಟಣ (ಹಂಗರಹಳ್ಳಿ)\,\nಹುಲಿಯೂರುದುರ್ಗ ಹೋಬಳಿ\,\nಕುಣಿಗಲ್ ತಾಲೂಕು\, ತುಮಕೂರು ಜಿಲ್ಲೆ\, ಕರ್ನಾಟಕ. \n॥ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಿ\, ಭಕ್ತಿ-ಶ್ರದ್ಧೆಯಿಂದ ಕ್ಷೇತ್ರಕ್ಕೆ ಆಗಮಿಸಿ ದಿವ್ಯ ಆಶೀರ್ವಾದವನ್ನು ಪಡೆಯಿರಿ ॥ 🙏🏻🌺 \nಜೈ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರಿಗೆ ನಮಃ.
URL:https://vidyachowdeshwaritemple.org/event/%e0%b2%b6%e0%b3%83%e0%b2%82%e0%b2%97%e0%b3%87%e0%b2%b0%e0%b2%bf-%e0%b2%b6%e0%b3%8d%e0%b2%b0%e0%b3%80-%e0%b2%b6%e0%b2%be%e0%b2%b0%e0%b2%a6%e0%b2%be-%e0%b2%aa%e0%b3%80%e0%b2%a0%e0%b2%a6-%e0%b2%b6/
ATTACH;FMTTYPE=image/jpeg:https://vidyachowdeshwaritemple.org/wp-content/uploads/2026/06/sri-vidya-chowdeshwari-event.jpg
END:VEVENT
BEGIN:VEVENT
DTSTART;TZID=Asia/Kolkata:20260629T080000
DTEND;TZID=Asia/Kolkata:20260629T233000
DTSTAMP:20260717T215503
CREATED:20260627T093947Z
LAST-MODIFIED:20260627T094046Z
UID:757-1782720000-1782775800@vidyachowdeshwaritemple.org
SUMMARY:ಜೂನ್ 29ರ ಸೋಮವಾರದಂದು ಆಷಾಢ ಹುಣ್ಣಿಮೆಯ ಭವ್ಯ ಪೂಜಾ ಮಹೋತ್ಸವ
DESCRIPTION:ಭಕ್ತರ ಆರಾಧ್ಯ ದೈವ\, ಶೃಂಗೇರಿ ಜಗದ್ಗುರು ಶಾರದಾ ಪೀಠದ ದಿವ್ಯ ಆಶೀರ್ವಾದದೊಂದಿಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಜಿ. ದೇವಪಟ್ಟಣದಲ್ಲಿ ನೆಲೆನಿಂತಿರುವ ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಜೂನ್ 29ರ ಸೋಮವಾರದಂದು ಆಷಾಢ ಹುಣ್ಣಿಮೆಯ ಭವ್ಯ ಪೂಜಾ ಮಹೋತ್ಸವ ಜರುಗಲಿದೆ! \nಹೌದು\, ಆಷಾಢ ಹುಣ್ಣಿಮೆಯ ಈ ಪವಿತ್ರ ದಿನದಂದು ತಾಯಿಯ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಲಿವೆ.\nಜೂನ್ 28 ಭಾನುವಾರ ಮಧ್ಯರಾತ್ರಿ: ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರಿಗೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ವಿಶೇಷ ನಿಶಾ ಪೂಜೆ ನಡೆಯಲಿದೆ.\nಜೂನ್ 29 ಸೋಮವಾರ: ತಾಯಿಗೆ ಕಣ್ಮನ ಸೆಳೆಯುವ ವಿಶೇಷ ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಲಿದೆ. \nಮುಖ್ಯವಾಗಿ ಜೂನ್ 29ರ ಬೆಳಗಿನ ಜಾವ 5:00 ಗಂಟೆಗೆ\, ತಾಯಿಗೆ ಲೇಪಿತವಾದ ಪವಿತ್ರ ಅರಿಶಿನದಿಂದ ಭಕ್ತರಿಗೆ ಅರಿಶಿನ ಸ್ನಾನ ಹಾಗು ಸಾಲಿಗ್ರಾಮ ತೀರ್ಥವನ್ನು ಸಂಪ್ರೋಕ್ಷಣೆ ಮಾಡುವ ಪುಣ್ಯ ಕಾರ್ಯಕ್ರಮ ಜರುಗಲಿದೆ.\nಇದೇ ವೇಳೆ\, ಭಕ್ತರ ಸುಖ-ಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸುದರ್ಶನ ಹೋಮಗಳು ಶ್ರದ್ಧಾಭಕ್ತಿಗಳಿಂದ ನೆರವೇರಲಿವೆ. ತದನಂತರ ಹಂಗರಹಳ್ಳಿ ಬಸವಣ್ಣನವರ ನೇತೃತ್ವದಲ್ಲಿ\, ಉತ್ಸವ ಮೂರ್ತಿಗಳಾದ ಶ್ರೀ ಶನೇಶ್ವರ ಸ್ವಾಮಿ\, ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರು ಮತ್ತು ಚಿಕ್ಕ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರದೊಂದಿಗೆ ಭವ್ಯ ಪ್ರಾಕಾರೋತ್ಸವ ನಡೆಯಲಿದೆ. \nಲೋಕ ಕಲ್ಯಾಣಕ್ಕಾಗಿ ನಡೆಯುವ ಈ ಮಹಾ ಪೂಜಾ ಕೈಂಕರ್ಯದಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಕೆ.ಜಿ. ದೇವಪಟ್ಟಣದ ಕ್ಷೇತ್ರಕ್ಕೆ ಆಗಮಿಸಿ\, ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ದರ್ಶನ ಪಡೆದು ಕೃಪಾಕಟಾಕ್ಷಕ್ಕೆ ಪಾತ್ರರಾಗಿ.
URL:https://vidyachowdeshwaritemple.org/event/%e0%b2%9c%e0%b3%82%e0%b2%a8%e0%b3%8d-29%e0%b2%b0-%e0%b2%b8%e0%b3%8b%e0%b2%ae%e0%b2%b5%e0%b2%be%e0%b2%b0%e0%b2%a6%e0%b2%82%e0%b2%a6%e0%b3%81-%e0%b2%86%e0%b2%b7%e0%b2%be%e0%b2%a2-%e0%b2%b9%e0%b3%81/
CATEGORIES:Poornima
ATTACH;FMTTYPE=image/jpeg:https://vidyachowdeshwaritemple.org/wp-content/uploads/2026/06/WhatsApp-Image-2026-06-26-at-8.23.34-PM.jpeg
END:VEVENT
END:VCALENDAR